Tuesday, May 26, 2015

ಅಕ್ಕಯ್ಯ ಮತ್ತೊಮ್ಮೆ ಜನುಮದಿನದ ಶುಭಾಶಯಗಳು!!!

ವಿದ್ಯೆ ಬುದ್ದಿ ಇಲ್ಲದ ಕುರಿ ಕಾದುಕೊಂಡು ಜೀವನ ಮಾಡುತ್ತಿದ್ದ ಕುರುಬರ ಪಿಳ್ಳೆ.. ಆ ರಾಜ್ಯದ ಮಂತ್ರಿಯ ಕುತಂತ್ರದಿಂದ ರಾಜಕುಮಾರಿಗೆ ಪತಿಯಾಗುತ್ತಾನೆ.. ನಿಜವನ್ನು ಅರಿತ ರಾಜಕುಮಾರಿ.. ಕಾಳಿ ಮಂದಿರಕ್ಕೆ ಕರೆತಂದು ಕಾಳಿಯನ್ನು ಪ್ರಾರ್ಥಿಸುವಂತೆ ಹೇಳಿ ವಿದ್ಯೆ ಬುದ್ದಿ  ಕೇಳಿ ಎಂದು ಹೇಳುತ್ತಾಳೆ.. 

ಕಾಳಿ ಮಾತೆ ಸಂಚಾರಕ್ಕೆ ಹೋದವಳು ದೇವಾಲಯಕ್ಕೆ ಬರುತ್ತಾಳೆ... ಇವನು ಬಾಗಿಲನ್ನು ತೆರೆಯುವುದೇ ಇಲ್ಲ ... 
ಎಷ್ಟು ಕೇಳಿದರೂ ಬಾಗಿಲನ್ನು ತೆರೆಯುವುದಿಲ್ಲ.. ವಾಗ್ಧಾನ ನೀಡುತ್ತಾಳೆ.. ನೀ ಕೇಳಿದ್ದನ್ನು ಕೊಡುವೆ ಎಂದು 
ಇದು ನಿಮಗೆಲ್ಲರಿಗೂ ತಿಳಿದವಿಷಯ ..  ಮುಂದಿದೆ ನೋಡಿ ಅದರ ಮುಂದುವರಿಕೆ.. 

ಬಾಗಿಲನ್ನು ತೆರೆದು.. ಕಾಳಿ ಮಾತೆಯನ್ನು ನೋಡುತ್ತಾನೆ.. ನೋಡಿದರೆ ಅಲ್ಲಿ ಕಾಳಿ ಮಾತೆಗೆ ಬದಲಾಗಿ ಪ್ರತಿ ಮಾತೆ ನಿಂತಿದ್ದಾರೆ.. ನಡುಗುತ್ತಾ ಬರುವ ಕುರುಬರ ಪಿಳ್ಳೆಯ ಬದಲಾಗಿ ಶ್ರೀಕಾಂತ ನಿಂತಿದ್ದಾನೆ.. ನಡುಗುತ್ತಾ ನಡುಗುತ್ತಾ "ಅಕ್ಕಯ್ಯ ಇದೇನು ನಿಮ್ಮ ಉಗ್ರವತಾರ ಈ ನಿಮ್ಮ ಅಣ್ಣನ ಮೇಲೆ.. ಯಾಕೆ ಈ ಆಗ್ರಹ.. ದಯಮಾಡಿ ಶಾಂತವಾಗಿ.. ನಿಮ್ಮ ದಯೆ ಈ ಪಾಮರನ ಮೇಲೆ ಇರಲಿ.. ಯಾಕೆ ಈ ಕೋಪ ಹೇಳಿ ಹೇಳಿ"

"ಅಣ್ಣಾ ನಮ್ಮ ಬಳಗದಲ್ಲಿ ಪ್ರತಿಯೊಬ್ಬರ ವಿಶೇಷ ದಿನಗಳಲ್ಲಿ ನೀವು ಬರೆಯುತ್ತಿದ್ದ ಲೇಖನಗಳನ್ನು ಓದಲು ಕಾಯುತ್ತಿದ್ದೆವು.. ಆದರೆ ಈ ನಡುವೆ ನಿಮಗೆ ಫೇಸ್ ಬುಕ್, ಬ್ಲಾಗ್, ಅದು ಇದು ಗುಂಪಿನ ಸ್ನೇಹಿತರು ಹೆಚ್ಚಾಗಿ ನಿಮಗೆ ಕೊಬ್ಬು ಜಾಸ್ತಿಯಾಗಿದೆ.. ಜೊತೆಯಲ್ಲಿ ಬಂದ ನಮ್ಮನ್ನೆಲ್ಲಾ ಮರೆತಿದ್ದೀರಿ.. ನಿಮಗೆ ನಾವೆಲ್ಲಾ ಬೇಡವಾಗಿದ್ದೇವೆ.. ಅದಕ್ಕೆ ನಿಮ್ಮ ಮೇಲೆ ಕೋಪ.. "

"ಅಕ್ಕಯ್ಯ.. ಇಲ್ಲಾ ಅಕ್ಕ ನಿಮ್ಮನ್ನೆಲ್ಲ ನಾ ಮರೆಯುವುದೇ.. ಅದನ್ನು ಮರೆತರೆ ಕೀ ಬೋರ್ಡ್ ನಲ್ಲಿ ಕೀ ಗಳನ್ನೇ ಮರೆತಂತೆ.. ಅದು ನನ್ನಿಂದ ಸಾಧ್ಯವೇ.. ಒಪ್ಪಿಕೊಳ್ಳುವೆ ನನ್ನ ಶೈಲಿಯಲ್ಲಿ ಉದ್ದುದ್ದ ಡಬ್ಬ ಕಥೆಗಳನ್ನು ನಿಮ್ಮೆಲ್ಲರ ವಿಶೇಷ ದಿನಗಳಲ್ಲಿ ಬರೆದಿಲ್ಲ ಆದರೆ.. ಚಿಕ್ಕ ಚೊಕ್ಕ ಮಾತುಗಳನ್ನು ಹೇಳಿದ್ದೇನೆ.. ಬರೆದಿದ್ದೇನೆ... ಇದಕ್ಕೆ ನನ್ನ ಕೆಲಸದ ಒತ್ತಡವು ಕಾರಣ ಮತ್ತು ಕೆಲವೊಮ್ಮೆ ಮನಸ್ಥಿಯೂ ಕಾರಣ"

"ಇಲ್ಲ ಅಣ್ಣ ನಂಬಲು ಸಾಧ್ಯವಿಲ್ಲ.. ಬೇರೆ ಎಲ್ಲರಿಗೂ ನೀವು ಬರೆಯುತ್ತೀರಾ ನಮಗೆ ಮಾತ್ರ ಯಾಕೆ ತಪ್ಪಿದೆ.. ನಿಮಗೆ ನಾವೆಲ್ಲಾ ಬೇಡ ಅನ್ನಿಸಿದೆ ಅದಕ್ಕೆ ಹೀಗೆಲ್ಲ ಮಾಡುತ್ತಿದ್ದೀರ.. ಅದಕ್ಕೆ ನಿಮ್ಮ ಮೇಲೆ ಕೋಪ.. ನಮ್ಮವರಿಗೂ ಹೇಳಿದ್ದೇನೆ.. ನಿಮ್ಮ ವಿಶೇಷ ದಿನಗಳಲ್ಲಿ ನಾವು ಯಾರೂ ನಿಮಗೆ ಫೋನ್ ಮಾಡೋಲ್ಲ ಮತ್ತು ವಿಶ್ ಮಾಡೋಲ್ಲ ಅಂತ ಮತ್ತು ಮಾಡಬಾರದು ಅಂತ.. ಇದೆ ನಿಮಗೆ ನಾ ಕೊಡುತ್ತಿರುವ ಶಿಕ್ಷೆ" 


ದಯಮಾಡಿ ಅನುಗ್ರಹ ತೋರಿಸಿ ಈ ನಿಮ್ಮ ಅಣ್ಣನ ಮೇಲೆ.. ಬಡವನ ಮೇಲೆ ಈ ಪರಿಯ ಕೋಪ ಬೇಡ ಅಕ್ಕಯ್ಯ.. ನಿಮಗೆ ಸಾಷ್ಟ್ರಾಂಗ ನಮಸ್ಕಾರ ಮಾಡುವೆ.. "

ಕೊಂಚ ಶಾಂತವಾದ ಪ್ರತಿ ಅಕ್ಕಯ್ಯ.. "ಇಲ್ಲ ಅಣ್ಣ ದಯಮಾಡಿ ಕಾಲಿಗೆ ನಮಸ್ಕರಿಸಬೇಡಿ ನೀವು ನನ್ನ ಮುದ್ದು ಅಣ್ಣ... ಹಾಗೆಲ್ಲ ಮಾಡಬಾರದು.. ಆದರೆ ಇದಕ್ಕೆ ಶಿಕ್ಷೆ ಕೊಡಲೇ ಬೇಕು.. ಎಲ್ಲಿ ನಿಮ್ಮ ನಾಲಿಗೆಯನ್ನು ತೆರೆಯಿರಿ.. ಅದರ ಮೇಲೆ ನನ್ನ ದೋಸೆ ಮಗಚುವ ಕೈಯಿಂದ ಬರೆಯಬೇಕು"

ಬೀಸುವ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಎನ್ನುವ ಹಾಗೆ ಕೊಂಚ ಶಾಂತಳಾದ ಅಕ್ಕಯನನ್ನು ಕಂಡು.. ಅಕ್ಕಯ್ಯ ಹೇಳಿದ ಹಾಗೆ ನಾಲಿಗೆಯನ್ನು ಚಾಚಿದನು ಶ್ರೀಕಾಂತ... 

ಅಕ್ಕಯ್ಯ ಸುಡು ಸುಡುತ್ತಿದ್ದ ಮಗಚುವ ಕೈಯನ್ನು ಟೊಮೇಟೊ ಸೂಪಲ್ಲಿ ಅದ್ದಿ ಅದ್ದಿ ಈ ಕೆಳಗಿನ ಸಾಲನ್ನು ಬರೆದರು... 
"ನನ್ನದು ತಪ್ಪಾಯಿತು.. ನನ್ನ ಎಲ್ಲಾ ಗೆಳೆಯರ ಬಳಗದ ಸದಸ್ಯರಿಗೂ ನನ್ನ ಅಕ್ಕ ತಂಗಿಯರಿಗೂ ಒಂದೇ ರೀತಿಯಲ್ಲಿ ನನ್ನ ಶೈಲಿಯಲ್ಲಿ ಶುಭಾಶಯಗಳನ್ನು ಕೋರುತ್ತೇನೆ.. ಎಷ್ಟೇ ಕೆಲಸದ ಒತ್ತಡವಿರಲಿ.. ಪರಿಸ್ಥಿತಿ ಏನೇ ಆಗಿರಲಿ ನಾ ಕಟ್ಟಿಕೊಂಡ ಈ ಕಾರ್ಯವನ್ನು ಬಿಡಲಾರೆನು.. .. ಇದಕ್ಕೆ ಆ ಕೀ ಬೋರ್ಡ್ ಸಾಕ್ಷಿ.. ಇದಕ್ಕೆ ತಪ್ಪಿದರೆ.. ಪ್ರತಿಯೊಬ್ಬರ ವಿಶೇಷ ದಿನಗಳಿಗೆ ಎರಡೆರಡು ಬಾರಿ ಶುಭಾಷಯ ಪತ್ರಗಳನ್ನು ಬರೆಯಬೇಕು.. ಇದೆ ನಾ ನಿಮಗೆ ಕೊಡುತ್ತಿರುವ ಶಿಕ್ಷೆ" ಎಂದು ಶಾಸನವನ್ನು ಬರೆದು ಬಿಟ್ಟರು ಅಕ್ಕಯ್ಯ.. 

"ಅಣ್ಣಾ ನಾ ಬರೆದಿದ್ದೇನೆ.. ಆ ನಾಲಿಗೆಯನ್ನು ಒಳಗೆ ಎಳೆದುಕೊಳ್ಳಿ.. ಬರೆದ ಅಕ್ಷರಗಳು ನಿಮ್ಮ ಹೃದಯದಲ್ಲಿ ಕೂತು ಬಿಡುತ್ತವೆ.. ಮತ್ತೆಂದು ಈ ರೀತಿಯ ತಪ್ಪು ಮಾಡದಿರಿ"

ಸಂತೃಪ್ತನಾದ ಶ್ರೀಕಾಂತ.. "ಅಕ್ಕಯ್ಯ ನಾನು ಯಾರನ್ನು ಮರೆತಿಲ್ಲ ಮರೆಯುವುದಿಲ್ಲ.. ಆದರೆ ನಿಮಗೆ ಬೇಸರ ತಂದ ವಿಚಾರ ನನಗೆ ಬೇಸರವಾಗಿದೆ... ಇನ್ನೆಂದು ಹೀಗೆ ಆಗುವುದಿಲ್ಲ.. ದಯಮಾಡಿ ಕ್ಷಮಿಸಿ.. ಮತ್ತೆ ನಿಮ್ಮ ಜನುಮದಿನಕ್ಕೆ ನನ್ನ ಶುಭಾಶಯಗಳನ್ನು ಒಪ್ಪಿಸಿಕೊಂಡು ಕೃತಾರ್ಥನನ್ನಾಗಿ ಮಾಡಿ.. "

"ಕ್ಷಮಿಸಿ ಆಗಿದೆ.. ಅಣ್ಣ.. ಈಗ ಮನಸ್ಸಿಗೆ ಸಮಾಧಾನವಾಯಿತು.. ನನ್ನ ಮುದ್ದು ಅಣ್ಣನಿಗೆ ಬಯ್ದದ್ದಕ್ಕೆ ನನ್ನನ್ನು ಕ್ಷಮಿಸಿ ಅಣ್ಣಯ್ಯ.. "

"ಹುಟ್ಟು ಹಬ್ಬದ ಶುಭಾಶಯಗಳು ಅಕ್ಕಯ್ಯ... "

(ನಾವು ಐವರು ಶಾಲಾ ದಿನಗಳಿಂದ ಸ್ನೇಹಿತರು.. ನಮ್ಮ ಜೀವನದ ಮೂವತ್ತು ವರ್ಷಗಳಿಗೂ ಹೆಚ್ಚು ಜೊತೆಯಲ್ಲಿ ಕಳೆದಿದ್ದೇವೆ.. ನಮ್ಮ ಜೀವನದಲ್ಲಿ ಬಂದ ನಮ್ಮ ಸಂಗಾತಿಗಳು ಕೂಡ ಈ ಸ್ನೇಹಕ್ಕೆ ತಂಪನ್ನು ಎರೆದು.. ಅವರವರ ಸಂಗಾತಿಗಳು ಮಿಕ್ಕವರಿಗೆ ಮುದ್ದು ಸಹೋದರಿಗಳಾಗಿದ್ದಾರೆ.. ಅಂಥಹ ಸಹೋದರಿಯರಲ್ಲಿ ಆಗ್ರ ಸ್ಥಾನದಲ್ಲಿ ಕುಳಿತಿರುವ ಪ್ರತಿಭಾ ಶಶಿಧರ್ ಅದೇನೂ ನನ್ನ ಮೇಲೆ ವಿಪರೀತ ಅಭಿಮಾನ.. ನಾನು ಇವರನ್ನು ಅಕ್ಕ ಎನ್ನುತ್ತೇನೆ ಇವರು ನನ್ನ ಅಣ್ಣ ಎನ್ನುತ್ತಾರೆ.. ನನ್ನ ಜೀವನದ ಏನೇ ಕಷ್ಟ ಸುಖಗಳನ್ನು ಇವರ ಜೊತೆಯಲ್ಲಿ ಹಂಚಿಕೊಂಡರೆ ನನಗೆ ಸಮಾಧಾನ.. ಕೆಲಸದ ಒತ್ತಡದಿಂದ ಇವರ ವಿವಾಹ ದಿನಕ್ಕೆ ಮತ್ತು ಕಳೆದ ವರ್ಷದ ಜನುಮದಿನಕ್ಕೆ ಶುಭಾಶಯಗಳನ್ನು ತಲುಪಿಸಿರಲಿಲ್ಲ ನನ್ನ ಶೈಲಿಯಲ್ಲಿ ಅದಕ್ಕೆ ಕೆಂಡಾಮಂಡಲವಾಗಿದ್ದರು.. ಆ ಕೋಪವನ್ನು ತಣಿಸಲು ನಾನು ಕಾಳಿದಾಸನಾಗಬೇಕಾಯಿತು.. ಆ ಮಾತೆಯ ಕೋಪವನ್ನು ತಣಿಸಲು ಈ ಲೇಖನ)

ಅಕ್ಕಯ್ಯ ಮತ್ತೊಮ್ಮೆ ಜನುಮದಿನದ ಶುಭಾಶಯಗಳು!!! 

4 comments:

 1. Awesome srikanth…..
  How could you even get the idea of linking with Kalidasa story????
  nimma tale olage yenide??? From where and how do you get such ideas?

  Now I am waiting for my next birthday J

  ReplyDelete
 2. Hallo pratibha

  Many many happy returns of the day ��. Let the day add more colour to your journey of life which is already filled with love and happiness.

  Have great memorable moments of the day.

  Yours
  Satish, Samatha and Dhanush.

  ReplyDelete
 3. Super Narration! AT least this way she will be pleased!

  ReplyDelete
 4. Sumangala VaddoddiMay 26, 2015 at 8:37 PM

  Nice blog….

  Thanks

  Suma

  ReplyDelete