Friday, April 4, 2014

ಸುನಿತಾ ಅನ್ನುವ ಪುಟ್ಟಿ!!!!

"ಮೇಡಂ"

ಒಂದು ದಪ್ಪವಾದ ದ್ವನಿ ಕರೆದಾಗ.. ಕೂದಲನ್ನು ಸರಿ ಮಾಡಿಕೊಳ್ಳುತ್ತಾ.. ಬೇಲೂರಿನ ಗೊಂಬೆಯ ಹಾಗೆ ಹಾಗೆ ೬೫ ಕೋನದಲ್ಲಿ ತಿರುಗಿದರು..

ಹುಬ್ಬುಗಳೇ ಮಾತಾಡಿದವು

"ಮೇಡಂ.. ಇವರು  ಶ್ರೀಕಾಂತ್ ಮಂಜುನಾಥ್ ಅಂತ ನಮ್ಮ ಟೀಂ ಗೆ ಹೊಸದಾಗಿ ಸೇರಿಕೊಂಡಿದ್ದಾರೆ"

ಕನಿಷ್ಠ ಫೋಟೋಗೆ ಕೊಡುವಷ್ಟು / ತೋರಿಸುವಷ್ಟು ಸಹ ಹಲ್ಲು ಕಾಣಲಿಲ್ಲ..

ಅಯ್ಯೋ ನಮ್ಮ ಬಣ್ಣಕ್ಕೆ ಯಾರೂ ತಾನೇ ಮಾತಾಡಿಸುತ್ತಾರೆ ಎಂದು ಅನ್ನಿಸುವಾಗಲೇ..

"ಹಾಯ್" ಎನ್ನುವ ಕೋಮಲ ಸ್ವರ ಬಂತು..

"ಹಾಯ್" ಎಂದು ಅಲ್ಲಿಂದ ಅಂತರ್ದಾನವಾದೇ...

ಹೀಗೆ ಕಳೆಯಿತು.. ೨೦೦೮ ರ ಮಾರ್ಚ್ ಮಾಸದಲ್ಲಿ.. ಹೀಗೆ ಚಾಟ್ ಮಾಡುತ್ತಾ.. ಒಂದು ವಿಷಯ ಹೇಳಲೇ ಎಂದೇ..

"ಹೇಳಿ" ಅಂದಿತು ಆ ಕಡೆಯ ಸ್ವರವಿಲ್ಲದ ಸ್ವರ..

"ನೀವು ಸೀದಾ ನನ್ನ ತಂಗಿಯ ಸ್ಥಾನ ತುಂಬುವುದಕ್ಕೆ ಸಮರ್ಥರಿದ್ದೀರ"

"Thank you Bro"

ಮನಸ್ಸಿಗೆ ಹಕ್ಕಿಯ ರೆಕ್ಕೆ ಬಂದಷ್ಟು ಖುಷಿ.. ಆ ಹೊತ್ತಿನ ತನಕ  ನನ್ನನ್ನು ಯಾರೂ Bro  ಅಂತ ಕೂಗಿರಲೂ ಇಲ್ಲ ಕರೆದಿರಲೂ ಇಲ್ಲಾ..

ಮುಂದಿನ ಮೂರು ವರ್ಷಗಳು ಕಚೇರಿ ಕೆಲಸ ಮಾಡುವಾಗಲೂ ನಮ್ಮ ಅಣ್ಣ ತಂಗಿ ಅನುಬಂಧ ಹಾಗೆಯೇ ಮುಂದುವರೆದಿತ್ತು.

ಸುನಿತಾ ಅನ್ನುವ ಹೆಸರಿಗಿಂತ "ಪುಟ್ಟಿ" ಎನ್ನುವ ಹೆಸರೇ ಇವಳಿಗೆ ಸರಿಯಾಗಿ ಹೊಂದುತ್ತದೆ..

ಇಷ್ಟವಾಗುವ ಮುಖಭಾವ.. ಧ್ವನಿ..ಕಣ್ಣುಗಳು.. ಇವಕ್ಕಿಂತ ಮಿಗಿಲಾಗಿ Bro ಎಂದು ಕರೆವಾಗ ಆ ಧ್ವನಿಯಲ್ಲಿನ ಮಧುರತೆ.. ಹೃದಯದಿಂದ ಕರೆಯುವ ಆ ಸ್ವರ ತುಂಬಾ ಇಷ್ಟವಾಗುತ್ತದೆ.

ನನ್ನ ಜೀವನದ ಮೊದಲ ಪುಟ್ಟಿ ಇವಳು. ಆರು ವರ್ಷಗಳ ಪರಿಚಯ.. ಇವಳು ಅರವತ್ತು ವರ್ಷಗಳಿಂದ ನನಗೆ ಪರಿಚಯ ಅನ್ನಿಸುವಷ್ಟು ಆತ್ಮೀಯಳಾಗಿಬಿಟ್ಟಿದ್ದಾಳೆ..

ಇಂದು ಪುಟ್ಟಿಯ ಜನುಮದಿನ.. ನಾನು ಪ್ರತಿ ಭಾರಿ ಪುಟ್ಟಿಯನ್ನು ನೆನೆದಾಗೆಲ್ಲ ಮೊದಲ ಭೇಟಿಯ ಮಧುರ ನೆನಪುಗಳು ಕಾಡುತ್ತವೆ.

ನಮ್ಮಿಬ್ಬರ ಜೀವನದಲ್ಲಿ ಬೇಕಾದಷ್ಟು ಬದಲಾವಣೆಗಳಾದರೂ ನಮ್ಮಿಬ್ಬರ ಅಣ್ಣ ತಂಗಿ ಅನುಬಂಧ.. ಸ್ವಲ್ಪವೂ ಮಾಸದ ಹಾಗೆ ಸಾಗಿ ಬಂದಿದೆ..

ಪುಟ್ಟಿ ನಿನ್ನ ಜನುಮದಿನಕ್ಕೆ ನಾ ಏನೇ ಉಡುಗೆ ಕೊಟ್ಟರೂ ಕಡಿಮೆಯೇ ಕಾರಣ ನನ್ನ ಜೀವನದ ಮೊದಲ ಪುಟ್ಟಿ ನೀನು.. ಇಂದಿಗೂ ನಾ ಆರು ವರ್ಷಗಳಲ್ಲಿ ನಡೆದ ಪ್ರತಿ ಘಟನೆಗಳು ಮಾತುಗಳು ನನಗೆ ಕಂಠ ಪಾಠ ವಾಗಿವೆ.. ಕಾರಣ ನೀನು ನನಗೆ ಭಗವಂತ ಕೊಟ್ಟ ಮುದ್ದು ಮನಸ್ಸಿನ ಪುಟ್ಟಿ..

ನಿನ್ನ ಜೀವನದ ಎಲ್ಲಾ ಕನಸುಗಳು ನನಸಾಗಲಿ.. ಸುಂದರ ಬದುಕಿನಲ್ಲಿ ಮಧುರ ಭಾವ ತುಂಬಿದ ಹೆಜ್ಜೆಗಳು ಸದಾ ಮಲ್ಲಿಗೆಯ ಕಂಪಿನ ಹಾದಿಯಲ್ಲಿ ಸಾಗುತ್ತಿರಲಿ..

ತುಂಬಾ ಇಷ್ಟವಾದ ಪುಟ್ಟಿ ಹಾಗು ಚಿತ್ರ!!! ಚಿತ್ರ ಕೃಪೆ - ಪುಟ್ಟಿ 

ಹುಟ್ಟು ಹಬ್ಬದ ಶುಭಾಶಯಗಳು...... ಪುಟ್ಟಿ.. ನನ್ನ ಹೃದಯದಿಂದ!!!

4 comments:

 1. Thumba Thumba tnks bro... you made my day.. u cherished all d wonderful moments we spent together... really miss those moments:-) Once again thank you so so much bro!!

  ReplyDelete
 2. ಸುನೀತಾ ಅಕ್ಕ ..
  ಸ್ವಲ್ಪ ತಡವಾಗಿ ಜನುಮ ದಿನದ ಶುಭಾಶಯಗಳು ನಿಮಗೆ...
  ಅಣ್ಣನ ಮೊದಲ ಪುಟ್ಟಿ ನೀವನ್ನೋ ಸಣ್ಣದೊಂದು ಹೊಟ್ಟೆಕಿಚ್ಚಿದ್ದರೂ ನಮ್ಮಗಳಿಗೆ ದೊಡ್ಡಕ್ಕ ನೀವು ಅನ್ನೋ ದೊಡ್ಡ ಖುಷಿ ನಂದು.

  ಅಣ್ಣಾ ಎಂದಿನಂತೆ ಅತೀ ಆತ್ಮೀಯ ಜನುಮ ದಿನದ ಶುಭಾಶಯದ ಉಡುಗೊರೆ.
  ಇಷ್ಟವಾಯ್ತು...ಹತ್ತಿರವಾಯ್ತು...

  ReplyDelete