Tuesday, October 24, 2017

ಸಿಬಿ.. ಸಿಬಿ"eye".. ನಮ್ಮ ಗೆಳೆತನದ ಅದ್ಭುತ ಕಣ್ಣು ನಿವೇದಿತಾ ಚಿರಂತನ್

 CB...ಹೆಸರು ಹೇಗೆ  ಹುಟ್ಟಿತು ನನಗೂ ಗೊತ್ತಿಲ್ಲ.. ಸಾಮಾನ್ಯ  ನನಗೆ ಹತ್ತಿರವಾದವರು ಅಥವಾ ನಾನು ಹತ್ತಿರವಾದವರಿಗೆ ಪ್ರೀತಿಯಿಂದ ಅಡ್ಡ ಹೆಸರು ಇಡುವುದು ನನಗೆ ಹೈ ಸ್ಕೂಲ್ ಮಾಸ್ಟರ್ ಇಂದ ಸಿಕ್ಕ ಬಳುವಳಿ ..

ನಿವೇದಿತಾ ಹೆಸರು ನಿವಿ ಆಗಿತ್ತು.. ಆದರೂ  ಸಮಾಧಾನವಿರಲಿಲ್ಲ.. ನಾ ಹೆಸರಿಡುವ ಹೆಸರು ವಿಭಿನ್ನವಾಗಿರುತ್ತಿತ್ತು ಮತ್ತು ವಿಚಿತ್ರವಾಗಿರುತ್ತಿತ್ತು..

ಸಿಬಿ ಗೂ ನನಗೂ ಬಹಳ ಸಲ ಇದರ ಬಗ್ಗೆ ಮಾತಾಗಿತ್ತು.. ಶ್ರೀ ನನಗೆ ಯಾಕೆ ನಿಕ್ ನೇಮ್  ಕೊಟ್ಟಿಲ್ಲ.. ನಾನು ಸುಮ್ಮನೆ ನಕ್ಕು ಮಾತನ್ನು ಬದಲಿಸಿದ್ದೆ ಹಲವಾರು ಬಾರಿ..

ಅಂತೂ ಒಂದು ದಿನ ಆ ಮಹೂರ್ತ ಬಂದೆ ಬಿಟ್ಟಿತು.. ಹೆಸರು ಸಿಕ್ಕೇ ಬಿಟ್ಟಿತು ನಿವೇದಿತಾ ಸಿಬಿ ಆಗಿಬಿಟ್ಟರು.. !!!

ಒಂದು ಬ್ಲಾಗ್ ಬರಹಕ್ಕೆ ನಾ ಹಾಕಿದ ಕಾಮೆಂಟ್.. ಮತ್ತು ಫೇಸ್ಬುಕ್ ನಲ್ಲಿ ನಾ ಚಾಚಿದ ಸ್ನೇಹ ಹಸ್ತಕ್ಕೆ ಅವರ ಮೊದಲ ಪ್ರಶ್ನೆ..ನನ್ನ ಬ್ಲಾಗ್ ನಲ್ಲಿ ಕಾಮೆಂಟ್ ಮಾಡುವ ಶ್ರೀಕಾಂತ್ ಮಂಜುನಾಥ್ ನೀವೇನಾ., ಇಲ್ಲಿಂದ ಶುರುವಾಯಿತು ನಮ್ಮ ಗೆಳೆತನ.. ಹರಿಯುವ ನದಿ ಒಂದು ಪುಟ್ಟ ಝರಿಯಿಂದ ಶುರುವಾಗಿ ನದಿಯಾಗಿ ಕಡಲನ್ನು ಸೇರುವ ಹಾಗೆ.. ನಮ್ಮ ಗೆಳೆತನ ಒಂದು ಚಿಕ್ಕ ಹಾಯ್ ಇಂದು ಶುರುವಾಗಿದ್ದು ಇಂದು ಮಾತಾಡುತ್ತಲೇ ಇರುವ ಮಟ್ಟಕ್ಕೆ ತಂದು ನಿಂತಿದೆ..

ಸಿಬಿ ೭೦ ಸೆಕೆಂಡ್ಸ್ ಬೇಕು.. ಸಿಗುತ್ತಾ ಅಂತ ಕೇಳಿ.. ೭೦೦ ಸೆಕೆಂಡ್ಸ್ ಮಾತಾಡಿದ್ದು ಇದೆ..  ಮ್ಯಾರಥಾನ್ .... ಬರೋಬ್ಬರಿ ಹತ್ತು ಘಂಟೆಗಳ ಕಾಲ ಚಾಟ್ ಮಾಡಿದ್ದೇವೆ ಎಸ್ ಎಂ ಎಸ್ ಮೂಲಕ..

ಈ ರೀತಿಯ ಗೆಳೆತನಕ್ಕೆ ಏನೂ ಹೆಸರು ಕೊಡಬಹುದು..ಗೆಳತೀ, ಅಕ್ಕ, ತಂಗಿ.. ಊಹುಂ ಏನೂ ಅಲ್ಲ ಶುದ್ಧ ಗೆಳೆತನ.. ಪರಿಶುದ್ಧ ಗೆಳೆತನ.. ನನಗೆ  ಗೊಂದಲವಿದೆ ಅನಿಸಿದಾಗ  ಸಿಬಿ ೪೩೫ ಸೆಕೆಂಡ್ಸ್.. ಅಂತ ಒಂದು ಮೆಸೇಜ್ ಕಳಿಸಿದರೆ ಸಾಕು.. ತಕ್ಷಣ ಹಾಜರ್..

 ಇವಿಷ್ಟು ಪೀಠಿಕೆಯಾಯಿತು.. ಅಲ್ಲವೇ.. ಈಗ ನೋಡಿ ಒಂದು ಮಜಾ.. !!!

ಹೀಗೆ ಒಮ್ಮೆ ಸಮುದ್ರದ ದಡದಲ್ಲಿ ಓಡಾಡುತ್ತಿದ್ದೆ .. .ಐಸ್ ಕ್ರೀಮ್.. ಚಾಟ್ಸ್.. ಸೌತೆಕಾಯಿ, ಕಲ್ಲಂಗಡಿ.. ಅನಾನಾಸ್.. ಗೋಲಿ ಸೋಡಾ.. ಎಲ್ಲವೂ ಸಮುದ್ರ ತೀರ ವಿಹಾರಾರ್ಥಿಗಳ ಹೊಟ್ಟೆಯ ಯೋಗಕ್ಷೇಮ ನೋಡಿಕೊಳ್ಳುತ್ತಿತ್ತು..

ಸಮುದ್ರದ ಅಲೆಗಳ ಜೊತೆಯಲ್ಲಿ ಯಾರೋ ಮಾತಾಡುತ್ತಿದ್ದ ದೃಶ್ಯ ಕಂಡಿತು.., ಇದ್ಯಾರಪ್ಪಾ ಅಲೆಗಳ ಜೊತೆಯಲ್ಲಿ ಮಾತಾಡುತ್ತಿರುವವರು ಎಂದು ಆ ವ್ಯಕ್ತಿಯ ಹತ್ತಿರಕ್ಕೆ ಹೋಗುತ್ತಿದ್ದೆ.. ಅಷ್ಟರಲ್ಲಿ  ಕಾಲಿನ ಕೆಳಗೆ ಮರಳಿನ ರಾಶಿಯನ್ನು ಸುಯ್ ಎಂದು ಎಳೆದುಕೊಂಡು ಒಂದಷ್ಟು ಅಲೆಗಳು ಹೋದವು.. ಕಾಲಿನಡಿ ಮರಳುಕುಸಿದಿದ್ದರಿಂದ .. ನಾ ಅಲ್ಲಿಯೇ ತಪಕ್ ಅಂತ ಕುಸಿದು ಬಿದ್ದೆ..

ಒಂದು ಅಲೆ ಮತ್ತೆ ನನ್ನ ಹತ್ತಿರ ಬಂದಿತು.. ನೋಡು ಶ್ರೀ..  ನಾ ಒಂದು ಚುಟುಕು ಸಾಲುಗಳನ್ನು ಬರೆದಿದ್ದೇನೆ.. .. ಅದನ್ನ ಓದಿ ಹೇಳು ಹೇಗಿದೆ ಎಂದು..

ಅಲೆ ಮಹಾರಾಜನೇ.. ನೀ ಬರೆದಿದ್ದನ್ನ ನಾ ಓದಿ ವಿಮರ್ಶೆ ಮಾಡೋದೇ..

ತಕ್ಷಣ ಅಲೆ ಮೇಲಕ್ಕೆ ಎದ್ದು "ನೋಡು ಶ್ರೀ ಆನೆಯನ್ನು ಮುಟ್ಟಿ ನೋಡಿ ಅನುಭವ ಪಡೆದ ಹಾಗೆ ಒಬ್ಬೊಬ್ಬರ ಅನುಭವ ಒಂದೊಂದು ರೀತಿ.. ವಿಶೇಷ.. ವಿಭಿನ್ನ.. .. ಅದನ್ನ ವಿಶ್ಲೇಷಿಸೋಕೆ ಹೋಗಬಾರದು..ಆನೆ ನೆಡೆದದ್ದೇ ದಾರಿ.. ಈಗ ಅದೆಲ್ಲ ಕಥೆ ಬೇಡ.. ಇದನ್ನು ಓದಿ ಹೇಳು ಹೇಗಿದೆ ಎಂದು..

ಸರಿ  ಕಣಪ್ಪ.. ದೇವರು ಕೊಟ್ಟ ಸ್ನೇಹಿತ ನೀನು.. ನೀ ಹೇಳಿದ ಮೇಲೆ ಇಲ್ಲ ಅನ್ನೋಕೆ ಮಾತೆ ಬರೋಲ್ಲ.. ಕೊಡು ಓದುವೆ..

ಸುಂದರವಾದ ಚೌಕಟ್ಟಿನಲ್ಲಿ ಹಾಕಿದ ಪತ್ರಿಕೆ.. ಮುದ್ದಾದ ಅಕ್ಷರಗಳು ಮುತ್ತಿನ ಮಣಿಯ ಹಾಗೆ ಜೋಡಿಸಿದ ಹಾಗಿತ್ತು.. ಮೆಲ್ಲಗೆ ಕಣ್ಣರಳಿಸುತ್ತ ಓದಲು ಶುರುಮಾಡಿದೆ ..

​ಇದೊಂದು ದೊಡ್ಡ ಜಗತ್ತು, ಜಗತ್ತೆಂದರೆ ದೊಡ್ಡದೇ ಅಲ್ಲವೇ!! 

ಇಷ್ಟು ದೊಡ್ಡ ಜಗತ್ತಿನಲ್ಲಿ ನಮ್ಮ ಜೀವನ ಅಥವಾ ನಾವು ಅನ್ನೋದು ತೃಣಕ್ಕಿಂತಲೂ ಚಿಕ್ಕದು. 
ಆದರೂ ನಮ್ಮನ್ನು ಸೃಷ್ಟಿಸಿದ ಭಗವಂತ, "ನೋಡು ಮಗು, ನೀನು ಮಾತ್ರ ಎಲ್ಲಿಯೂ ನಿಲ್ಲಬಾರದು. 
ನಾ ನಿಲ್ಲಿಸು ಎಂದು ಹೇಳುವವರೆಗೂ ನಡೆಯುತ್ತಲೇ ಇರಬೇಕು"  ಎನ್ನುವ ನಿಯಮವನ್ನು ಮಾಡಿದ್ದಾನೆ. 
"ದಣಿವಾದರೆ ಮಾತ್ರ ಒಂದು ಮರದ ನೆರಳಿನಡಿ ಕುಳಿತು ವಿಶ್ರಾಂತಿ ಪಡೆಯಬಹುದು ಅಷ್ಟೇ.  
ಅರೆ ಘಳಿಗೆ ವಿಶ್ರಾಂತಿ ಪಡೆದು ನಿನ್ನ ಪಯಣ ಮತ್ತೆ ಮುಂದುವರೆಸಬೇಕು." ಎಂದು ಸ್ಪಷ್ಟ ಪಡಿಸಿದ್ದಾನೆ.  

ಆ ಅರೆ ಘಳಿಗೆಯ ವಿಶ್ರಾಂತಿ ನಮ್ಮನ್ನು ಮತ್ತೆ ಜೀವನದ ನಡೆ ಮುಂದುವರೆಸುವುದಕ್ಕೆ ಹುರಿದುಂಬಿಸುತ್ತದೆ.

 ಆ ಮರದ ಕೆಳಗೆ ಕುಳಿತಾಗ ಬೀಸುವ ತಣ್ಣನೆಯ ಗಾಳಿಯ ಹಾಗೆ, 
ಸವೆದು ಸುಸ್ತಾಗಿ ತರಚಿ-ಪರಚಿ ಗಾಯವಾಗಿದ್ದರೆ ವಾಸಿ ಮಾಡುವ ಮುಲಾಮಿನ ಹಾಗೆ. 
"ದೂರದೂರಿನಲ್ಲಿ ಒಂದು ಸುಂದರ ತಾಣವಿದೆ.  
ಅಲ್ಲಿ ಬಣ್ಣ ಬಣ್ಣದ ಕನಸ ಕಾಣಬಲ್ಲ, ಆ ಕನಸುಗಳನ್ನ ನನಸು ಮಾಡಬಲ್ಲ ಮಾಯಾ ನಗರಿ ಇದೆ", 
ಎಂದು ಕತೆ  ಹೇಳುತ್ತ ತನಗೇ ಅರಿವಿಲ್ಲದೆ ಆ ಪಯಣಿಗನಿಗೆ ಪ್ರೇರೇಪಿಸುವ ಸ್ಪೂರ್ತಿಯ ಚಿಲುಮೆಯ ಹಾಗೆ ಈ ಹುಡುಗಿ. 

ಅವರದೇ ರೀತಿಯಲ್ಲಿ ಹೇಳಬೇಕೆಂದರೆ: 


Their is this magic that binds her to 

every other person she meets. 

Creative and skillful art she carries. 


Witty one liners and the Colors she plays with. 

Problem solving techniques she possess 

Radiant and bright smile she endorses 

Frankness unlimited & cuteness overloaded. 

Kabhi Shayraana yaa phir kabhi kabhi 

Camere ki ankhon se nazme churaana. 

The list can go on n on to make it envious.


Shez choosy, shez crazy, and she iz 


none other than the "Niveous".


ನೀವ್ಸ್ ನಿಮ್ಮ ಈ Cheerful attitude ನೂರ್ಕಾಲ  ಹೀಗೆ ಇರಲಿ ಎಂದು ಆಶಿಸುತ್ತಾ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ನಿಮಗೆ ಅಪ್ಪುಗೆ 


ಓದುತ್ತಾ ಹೋದ ಹಾಗೆ ಅಲೆ ಅಲೆ ನಿಲ್ಲುತ್ತಾ ಹೋಯಿತು. ಸುಂದರ "ರೂಪ" ತಾಳಿತು.. ನನ್ನ ಕಣ್ಣುಗಳಲ್ಲಿ ಆನಂದದ ಆಣೆಕಟ್ಟು ನೀರಾಗಿ ಹರಿಯಲು ಶುರುಮಾಡಿತ್ತು ..

ಅರೆ DFR ನೀವೇ ಅಲೆಯಾಗಿ ಬಂದಿದ್ದೀರಾ .. ನಮ್ಮ ಸೊಗಸಾದ ಗೆಳತಿಗೆ ಅದ್ಭುತವಾಗಿ ಬರೆದಿದ್ದೀರ.. ನೀವು ಬರೆದ ಪ್ರತಿ ಸಾಲು ಸತ್ಯ ಸತ್ಯ ಸತ್ಯ...

"೧೯೦ ಸೆಕೆಂಡ್ಸ್ ಇದೆಯಾ DFR"

"ಖಂಡಿತಾ ಶ್ರೀ"

ಇಬ್ಬರೂ ಮೆಲ್ಲನೇ ಮರಳ ರಾಶಿ.. ಅಲೆಗಳ ರಾಶಿ ತುಂಬಿದ್ದ ಸ್ನೇಹದ ಕಡಲಿನತ್ತ ಹೆಜ್ಜೆ ಹಾಕಲು ಶುರುಮಾಡಿದೆವು..

"ಇಲ್ಲ ನೀ ನನ್ನ ಪ್ರಶ್ನೆಗಳಿಗೆ  ಉತ್ತರ ಕೊಡುವ ಕೊಡುವ ತನಕ ತನಕ ನಾ ನಾ ಇಲ್ಲಿಂದ ಇಲ್ಲಿಂದ ಹೋಗುವುದಿಲ್ಲ ಹೋಗುವುದಿಲ್ಲ.. ನೀ ಉತ್ತರ ಉತ್ತರ ಕೊಡ ಕೊಡ ಕೊಡಲೇಬೇಕು.. "

ಜೋರಾದ ಮಾತುಗಳು ಅಲೆಗಳ ಅಬ್ಬರವನ್ನು ಮೀರಿಸುತ್ತಿದ್ದವು.. ಕಡೆಯಲ್ಲಿ ಸೋತಿದ್ದು ಯಾರು ಅಂದಿರಾ.. ಇನ್ಯಾರು ಅಲೆಗಳೇ.. :-)

"ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ..
ನೀ ಇಲ್ಲಿ ಬಂದಿರೋದು ಪ್ರಶ್ನೆಗಳ ಕೇಳುವ ಸಲುವಾಗಿ
ಸ್ನೇಹದ ಲೋಕವಿದು..
ಸೋಲ್ ಮೇಟ್ ಗಳ ತಾಣವಿದು.. ನಿನಗೆ ಕೊಟ್ಟಿರುವ ಸ್ನೇಹದ ಪರಿಧಿ ನಿನ್ನ ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆ.. "

ನೋಡಲ್ಲಿ.. ಒಮ್ಮೆ ತಿರುಗಿ ನೋಡು...

ಅಲೆಗಳ ಜೊತೆಯಲ್ಲಿ ಮಾತಾಡುತಿದ್ದ ಹುಡುಗಿ ರವ್ವನೆ ತಿರುಗಿತು..

"ಅರೆ ರೂಪಕ್ಕ ನೀವು ಇಲ್ಲಿ" (ಪೂರಾ excitement) ..ಜೋರಾಗಿ ಒಂದು ಅಪ್ಪುಗೆ ಕೊಟ್ಟರು ರೂಪಕ್ಕನಿಗೆ

ನಾ ಅಲ್ಲಿಯೇ ಹಲ್ಲು ಬಿಡುತ್ತಾ ನಿಂತಿದ್ದೆ.. "ನನಗೆ ಗೊತ್ತು ಶ್ರೀ ಇದೆಲ್ಲ ನಿಮ್ಮದೇ ಕಿತಾಪತಿ.. ಹಾಯ್" ಎಂದು ತಮ್ಮ ಮಿಲಿಯನ್ ವಾಟ್ ಸ್ಮೈಲ್ ಕೊಡುತ್ತಾ ನನಗೆ ಹಸ್ತ ಲಾಘವ ಕೊಟ್ಟರು..

"ಅದೇನಿದು.. ಇಬ್ಬರೂ ಇಲ್ಲಿ.. ಏನೂ ಸಮಾಚಾರ.." ಮಗುವಿನ ಕುತೂಹಲ ಸಿಬಿ ಮೊಗದಲ್ಲಿ ಕಾಣುತ್ತಿತ್ತು...

ಒಂದು ನಿಮಿಷ ನಿವ್ಸ್ ಅಂದರು DFR
೯೦೦ ಕ್ಷಣಗಳು ಅಂದೇ ನಾನು

ಸರಿ..ಈ ಶ್ರೀಗೆ ಸೆಕೆಂಡ್ಸ್ ಭೂತ ಇನ್ನೂ ಬಿಟ್ಟಿಲ್ಲ.. ಸರಿ ಕಾಯೋಣ... ಅಂತ ಕೈಗೆ ಕಟ್ಟಿದ್ದ ಪುಟ್ಟ ರಿಸ್ಟ್ ವಾಚನ್ನು ನೋಡುತ್ತಾ ಕುಳಿತಿದ್ದರು..

ಶ್ರೀ ಮತ್ತು DFR ಹಾಗೆ ಸ್ವಲ್ಪ ದೂರ ಮಾತಾಡುತ್ತಾ ಹೋಗಿ.. ಓಡುತ್ತಾ ಓಡುತ್ತಾ ಬಂದು..

ಹ್ಯಾಪಿ ಬರ್ತ್ಡೇ ನಿವ್ಸ್ ಅಂತ DFR ವಿಶ್ ಮಾಡಿದರೆ..
ಹ್ಯಾಪಿ ಬರ್ತ್ಡೇ ಸಿಬಿ ಅಂತ ಶ್ರೀ ವಿಶ್ ಮಾಡಿದರು..

"ಸ್ನೇಹದ  ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ" ಐಸ್ ಕ್ರೀಮ್ ಗಾಡಿಯಲ್ಲಿನ ರೇಡಿಯೋ ಕಿರುಚುತ್ತಿತ್ತು..

ನಿವೇದಿತಾ ಅಲಿಯಾಸ್ ನೀವ್ ಅಲಿಯಾಸ್ ಸಿಬಿ.. ನಿಮಗೆ ಈ ಸೋಲ್ ಫ್ರೆಂಡ್ಸ್ ಕಡೆಯಿಂದ ಜನುಮದಿನದ ಶುಭಾಶಯಗಳು..

ತಕ್ಷಣ ಜೋರಾದ ಚಪ್ಪಾಳೆ ಕೇಳಿಸಿತು..ತಿರುಗಿ ನೋಡಿದರೆ.. ಅರ್ಪಿತಾ..

ಅರೆ ವಾಹ್.. ತಾನೇ ಸೃಷ್ಟಿಸಿದ ಪಾತ್ರ .. ತನ್ನ ಒಡತಿಗೆ ಶುಭಾಷಯ ಹೇಳಲು ಬಂದಿದ್ದಾಳೆ..

ಸಿಬಿ ಇದಕ್ಕಿಂತ  ಇನ್ನೇನು ಬೇಕು.. ನಿಮ್ಮ ಸ್ನೇಹದ ಝರಿಯಲ್ಲಿ ನಾವು ಸೇರಿಕೊಂಡಿರುವುದು ನಮ್ಮ ಭಾಗ್ಯ.. DFR.. ಸಿಬಿ .. ಇವರ ಜೊತೆಯಲ್ಲಿ ಅರ್ಪಿತಾ.. ..
ತ್ರಿವೇಣಿ ಸಂಗಮ 

ಶುಭಾಶಯಗಳನ್ನು ಅರ್ಪಿಸುವುದಷ್ಟೇ ನಮ್ಮ ಕೆಲಸ ಎಂದವು ಅಲೆಗಳು..

ಸಿಬಿ ಮತ್ತೊಮ್ಮೆ ಜನುಮದಿನದ ಶುಭಾಶಯಗಳು

(ರಂಗಾದ ಅಕ್ಷರಗಳಲ್ಲಿ ಬರೆದಿರುವ ಲೇಖನ ರೂಪ ಸತೀಶ್ ಅವರದ್ದು .... ಇಬ್ಬರು ಬೇರೆ ಬೇರೆ ರೀತಿಯಲ್ಲಿ ಬರೆದ ಲೇಖನವನ್ನು ಸ್ನೇಹದ ದಾರದಿಂದ.. ಗೆಳೆತನ ಎನ್ನುವ ಸೂಜಿಯಿಂದ ಹೊಲೆದು ಗೆಳೆತನಕ್ಕೆ ಒಂದು ವಸ್ತ್ರ ವಿನ್ಯಾಸಮಾಡುವ  ದುಸ್ಸಾಹಸಕ್ಕೆ ಕೈ ಹಾಕಿದ್ದೇನೆ.. ಒಪ್ಪಿಸಿಕೊಳ್ಳಿ)